ಅಥಣಿ

ಬೆಳಗಾಂ ಜಿಲ್ಲೆಯ ದಕ್ಷಿಣದ ತಾಲ್ಲೂಕು. ಬೆಳಗಾವಿಯಿಂದ ಬಿಜಾಪುರಕ್ಕೆ ಹೋಗುವ ರಸ್ತೆಯಲ್ಲಿದೆ. ಈ ತಾಲೂಕಿ ಜನಸಂಖ್ಯೆ 4,61,362 ಹಾಗೂ ಪಟ್ಟಣದ ಜನಸಂಖ್ಯೆ 39,200. ತಾಲ್ಲೂಕಿನ ಮುಖ್ಯ ಊರು. 160 27' - 160 58' ಉ. ಅ. ದವರೆಗೂ ಹಬ್ಬಿದೆ. ವಿಸ್ತೀರ್ಣ 816 ಚ.ಮೈ. ಇಲ್ಲಿ ಹಬ್ಬಿರುವ ಒಂದು ಬೆಟ್ಟದ ಸಾಲು ಇದನ್ನು ಎರಡು ಭಾಗಗಳಾಗಿ ಮಾಡಿದೆ. ಇಲ್ಲಿ ಕೃಷ್ಣಾನದಿ ಹರಿಯುತ್ತದೆ. ಮಳೆ ಕಡಿಮೆ. ಸರಾಸರಿ ವಾರ್ಷಿಕ ಮಳೆ 23". ಕಪ್ಪುಮಣ್ಣಿನಿಂದ ಕೂಡಿದೆಯಾದ್ದರಿಂದ ಹತ್ತಿ, ಕಡಲೆಕಾಯಿ, ಜೋಳ, ಕಡಲೆ, ಗೋದಿ, ದ್ವಿದಳಧಾನ್ಯಗಳು, ಸಜ್ಜೆ, ಮೆಣಸಿನಕಾಯಿ- ಮುಂತಾದವುಗಳನ್ನು ಹೆಚ್ಚಾಗೂ ನೀರೆತ್ತುವ ಬಾವಿಗಳಿಂದ ಕಬ್ಬನ್ನೂ ಬೆಳೆಯುತ್ತಾರೆ.
	
ಗೋದಿ, ಕಡಲೆಕಾಯಿ, ಹತ್ತಿ, ಅಡಕೆ, ತೆಂಗು, ಎಣ್ಣೆಬೀಜಗಳು ವಾಣಿಜ್ಯವಸ್ತುಗಳಾಗಿವೆ. ಅಕ್ಕಿ, ತೆಂಗು, ಅಡಕೆ ಪಶ್ಚಿಮ ಕರಾವಳಿ ಪ್ರದೇಶದಿಂದ ಇಲ್ಲಿಯ ಮಾರುಕಟ್ಟೆಗೆ ಬರುತ್ತವೆ. ದೊಡ್ಡ ರೆಗ್ಯುಲೇಟೆಡ್ ಮಾರ್ಕೆಟ್ ಇದೆ. ಹತ್ತಿಗಿರಣಿ, ಎಣ್ಣೆ ಮಿಲ್ಲುಗಳು ಮತ್ತು ಕೈಮಗ್ಗಗಳು ಇವೆ.										
(ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ